ಕೊಹ್ಲಿ ಆಗಸ್ಟ್ 2008 ರಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು

ಅಂದಿನಿಂದ ಅವರು ಟೆಸ್ಟ್ ODI ಮತ್ತು 120 ಆಟದ ಸ್ವರೂಪಗಳಲ್ಲಿ ಆಡುತ್ತಿದ್ದಾರೆ

ಮೊದಲು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್

2017 ರಲ್ಲಿ ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲಿಯೂ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದರು.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಸಚಿನ್ 

ತೆಂಡೂಲ್ಕರ್ ನಂತರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ ಅವರು 2011

ರ ಐಸಿಸಿ ವಿಶ್ವಕಪ್ ಮತ್ತು 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತದ ಹಲವು

ಮೈಲುಗಲ್ಲುಗಳಲ್ಲಿ ಇವರ ಪಾತ್ರ ಮಹತ್ವವಾಗಿದೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 25,000

ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಆರಂಭಿಕ ವೃತ್ತಿಜೀವನ

ವಿರಾಟ್ ಕೊಹ್ಲಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ದೆಹಲಿ ಅಂಡರ್ 15 ಮತ್ತು ಅಂಡರ್ 19 ತಂಡಗಳ ಭಾಗವಾಗಿದ್ದರು.

2006 ರಲ್ಲಿ ಅವರು ತಮ್ಮ 18ನೇ ವಯಸ್ಸಿನಲ್ಲಿ ದೆಹಲಿ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ

ಮಾಡಿದರು ಮತ್ತು ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿ ಭರವಸೆಯ ಆಟಗಾರ ಎನಿಸಿಕೊಂಡಿದ್ದರು

ನಂತರ ಅವರು 2008 ICE ಅಂಡರ್-19 ಕ್ರಿಕೆಟ್ ವಿಶ್ವಕಪ್ ನಲ್ಲಿ

ನಾಯಕನಾಗಿ ಭಾರತಕ್ಕೆ 2ನೇ U-19 ವಿಶ್ವಕಪ್ ತಂದುಕೊಟ್ಟಿದ್ದರು.

ಕೊಹ್ಲಿಯ ಪ್ರತಿಭೆ ಮತ್ತು ಸ್ಥಿರತೆ ಶೀಘ್ರದಲ್ಲೇ ಭಾರತೀಯ ಆಯ್ಕೆಗಾರರ ಗಮನವನ್ನು ಸೆಳೆಯಿತು

ಆಗಸ್ಟ್ 2008 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆದು,

ಅದೇ ಸರಣಿಯಲ್ಲಿ ಭಾರತದ ಪರ ಪದಾರ್ಪಣೆ ಮಾಡಿದರು.